Voice Media Logo

Mobile App

Voice Media Voice Media

ವೀರರ ನಂಬಿಕೆಯ ಸರಣಿ

Series 13 Episodes

ಕ್ರಿಸ್ತನ ಹೆಸರಿಗಾಗಿ ಬಾಧೆಪಡುವ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತಿವೆ ಮತ್ತು ಈ ಪೀಡಿತ ದೇಶಗಳಲ್ಲಿ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುವ ಮತ್ತು ಬೆಂಬಲಿಸುವ ಜವಾಬ್ದಾರಿಕೆ ನಮ್ಮ ಮೇಲಿದೆ. ಹುತಾತ್ಮರ ಧ್ವನಿಯು ಈ ಎಂಟು ಕಿರುಚಿತ್ರಗಳಲ್ಲಿ, ಮೂರು ಖಂಡಗಳಾದ್ಯಂತ ಹಿಂಸೆಗೆ ಒಳಗಾದ ಕ್ರಿಸ್ತನ ಹಿಂಬಾಲಕರು ಘೋರ ಬಾಧೆಗಳ ಮಧ್ಯೆ ತಮ್ಮ ನಿರೀಕ್ಷೆ ಮತ್ತು ನಂಬಿಕೆಯ ಕಥೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸಕರ ಎದುರು ಈ ವಿಶ್ವಾಸಿಗಳ ಸ್ಥಿರ ನಂಬಿಕೆ ಮತ್ತು ಕ್ಷಮಾಪಣೆಯಿಂದ ಪ್ರಪಂಚದ ಇತರ ಭಾಗಗಳಲ್ಲಿರುವ ನಮ್ಮ ಸಹೋದರ ಸಹೋದರಿಯರ ಮಹಾನ್ ಹೃದಯಗಳನ್ನು ಕುರಿತು ನಮಗೆ ನೆನಪಿಸುತ್ತದೆ.

Episodes

  • ಸಾರಾಳ ಕಥೆ

    ಭೂಗತ ಸಭೆಯು ನಿಯತಕಾಲಿಕವನ್ನು ಪ್ರಕಟಿಸಲು ಸಹಾಯ ಮಾಡಿದ್ದಕ್ಕಾಗಿ ಸಾರಾಳನ್ನು ಬಂಧಿಸಲಾಯಿತು ಮತ್ತು ಹೊಡೆಯಲಾಯಿತು.

    play
    06:47
  • ಅಲೆಕ್ಸ್ನ ಕಥೆ

    ಎಫ್.ಎ.ಆರ್.ಸಿ ಭಯೋತ್ಪಾದಕರ ನೇತೃತ್ವದ ಕ್ರೂರ ಹತ್ಯಾಕಾಂಡದಿಂದ ಮತ್ತು ತನ್ನನ್ನು ಕೊಲ್ಲಲು ಪ್ರಯತ್ನಿಸಿದವರನ್ನು ಯೇಸು ಕ್ರಿಸ್ತನ ಪ್ರೀತಿಯ ಮೂಲಕ ಕ್ಷಮಿಸಲು ಪ್ರಯತ್ನಿಸಿದ ಈ ಕೊಲಂಬಿಯಾದ ವ್ಯಕ್ತಿ ಬದುಕುಳಿದನು.

    play
    07:01
  • ಶಫಿಯಾಳ ಕಥೆ

    ತನ್ನ ಕ್ರೂರ ಜೈಲಿನ ಬಾಗಿಲು ತೆರೆದಿರುವುದನ್ನು ಕಂಡಾಗ ಶಫಿಯಾಳ ಅಪಹರಣದ ದುಃಸ್ವಪ್ನ ಕೊನೆಗೊಂಡಿತು. ಆದರೆ ಒಂದು ದುಃಸ್ವಪ್ನ ಕೊನೆಗೊಂಡಂತೆ ಇನ್ನೊಂದು ಆರಂಭವಾಯಿತು.

    play
    04:16
  • ಸಲಾವತ್ನ ಕಥೆ

    ತನ್ನ ನಂಬಿಕೆಗಾಗಿ ಜೈಲಿನಲ್ಲಿ ಸಮಯ ಕಳೆಯುವುದು ಹೇಗಿರುತ್ತದೆ ಎಂದು ಸಲಾವಾತ್‌ ತಿಳಿದಿದ್ದಾನೆ. ಅವನ ಕುಟುಂಬವು ಹೇಗೆ ಕಷ್ಟಪಟ್ಟಿತು ಎಂಬ ಸಂಗತಿ ಸಹ ಅವನಿಗೆ ತಿಳಿದಿದೆ. ಈಗ ತನ್ನನ್ನು ತಿರಿಗಿ ಜೈಲಿಗೆ ಕಳುಹಿಸಬಹುದು ಎಂದು ಅವನು ಭಾವಿಸುತ್ತಿದ್ದಾನೆ.

    play
    05:03
  • ಪಾಡಿನಾ ಕಥೆ

    ಪಾಡಿನಾ ತನ್ನನ್ನು ತಾನೇ ಕೊಲ್ಲಲು ನಿರ್ಧರಿಸಿದಳು. ಅವಳು ಯೇಸು ಕ್ರಿಸ್ತನನ್ನು ಮುಜುಗರಕ್ಕೀಡು ಮಾಡುವ ಮೂಲಕ… ಅಲ್ಲಾಹನನ್ನು ಗೌರವಿಸಲು ಯೋಚಿಸಿದಳು. ಅವಳು ಪರಿಪೂರ್ಣ ಮುಸ್ಲಿಂ ಆಗಿದ್ದಳು, ಆದರೆ ಶೀಘ್ರದಲ್ಲೇ ಮುಸ್ಲಿಮರು ಅವಳನ್ನು ಕೊಲ್ಲಲು ಬಯಸುತ್ತಾರೆ.

    play
    07:07
  • ಬೌಂಚನ ಕಥೆ

    ಈತನನ್ನು ಓರ್ವ ಕಮ್ಯುನಿಸ್ಟ್ ಸೈನಿಕನು ಎಂದು ಗೌರವಿಸಲಾಗಿದೆ. ಯೇಸು ಕ್ರಿಸ್ತನ ಹಿಂಬಾಲಕನೆಂದು ತಿರಸ್ಕರಿಸಲಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಕ್ರಿಸ್ತನಿಗಾಗಿ ಸೆರೆವಾಸಿಯಾಗಿದ್ದನು.

    play
    06:00
  • ವಿಕ್ಟೋರಿಯಾಳ ಕಥೆ

    ನೈಜೀರಿಯಾದ ಗೊಂಬೆಯಲ್ಲಿರುವ ಡೀಪರ್ ಲೈಫ್ ಸಭೆಯಲ್ಲಿ ವಿಕ್ಟೋರಿಯಾ ಮತ್ತು ಜೊತೆ ವಿಶ್ವಾಸಿಗಳು ಕಿರುಕುಳಕ್ಕೊಳಗಾದ ಸಭೆಗಾಗಿ ಒಟ್ಟಾಗಿ ಪ್ರಾರ್ಥಿಸಿದಾಗ, ಅವರು ಅಷ್ಟು ಬೇಗನೆ ತಮ್ಮನ್ನು ಹಿಂಸಿಸುತ್ತಾರೆ ಎಂದು ಊಹಿಸಲು ಸಾಧ್ಯವಾಗಲಿಲ್ಲ.

    play
    05:16
  • ಲಯೇನಾಳ ಕಥೆ

    ಲಯೇನಾ ಪ್ರಾರ್ಥಿಸುತ್ತಿದ್ದಂತೆ, ಯುದ್ಧದಿಂದ ಹಾನಿಗೊಳಗಾದ ಸಿರಿಯಾದಲ್ಲಿ ದೇವರಿಗೆ ಸಾಕ್ಷಿಯಾಗಿರಲು ಅವಳು ತನ್ನ ಜೀವಿತವನ್ನು ದೇವರಿಗೆ ಒಪ್ಪಿಸಿಕೊಟ್ಟಳು. ಆದರೆ ದೇವರು ತನ್ನ ಪ್ರಾಣಕ್ಕಿಂತ ಹೆಚ್ಚಿನ ಸಂಗತಿಯನ್ನು ಕೇಳುತ್ತಿರುವುದನ್ನು ಆಕೆ ಗ್ರಹಿಸಿಕೊಂಡಳು. ಆಕೆ ಆ ಸರ್ಮಪಣೆಯನ್ನು ಮಾಡಬಹುದೇ?

    play
    05:12
  • ಸುತಾನ ಕಥೆ

    ಸುತಾ ದೇವರಿಗೆ ವಿಧೇಯನಾಗಿದ್ದರಿಂದ ಏನಾಯಿತೆಂದು ನೋಡಿರಿ, ಹಿಂದೂ ಕಾರ್ಯಕರ್ತರು ಅವನನ್ನು ಬಿಟ್ಟು ಹೋಗುವಂತೆ ಆಜ್ಞಾಪಿಸಿದ ಹಳ್ಳಿಗೆ ಹಿಂತಿರುಗುವಾಗ, ಅವನ ಜೀವನವನ್ನು ಮಾತ್ರವಲ್ಲದೆ ತನ್ನನ್ನು ದ್ವೇಷಿಸಿದ ಮನುಷ್ಯನನ್ನು ಸಹ ಬದಲಾಯಿಸುತ್ತದೆ.

    play
    05:14
  • ಹನ್ನೆಲಿಯ ಕಥೆ

    ಹನ್ನೆಲಿ ಮತ್ತು ಆಕೆಯ ಕುಟುಂಬವು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಆರಾಮದಾಯಕವಾದ ಮನೆಯಿಂದ ಆಫ್ಘಾನಿಸ್ತಾನದಲ್ಲಿ ಮುಂದಿನ ಸಾಲಿನಲ್ಲಿ ಸೇವೆ ಸಲ್ಲಿಸಲು ಹೊರಟಾಗ, ಅವರಿಗೆ ಅಲ್ಲಿನ ಅಪಾಯಗಳು ತಿಳಿದಿದ್ದವು. ಆದರೆ ಅವರು ದೇವರ ಕರೆಯನ್ನು ನಿರಾಕರಿಸಲು ಆಗಲಿಲ್ಲ.

    play
    05:21
  • ರಿಚರ್ಡ್ ಕಥೆ

    ಒಬ್ಬ ಮನುಷ್ಯನ ನಂಬಿಗಸ್ತಿಕೆ ಮತ್ತು ಬಾಧೆಯು ಶೋಷಣೆಗೆ ಒಳಗಾದ ಕ್ರೈಸ್ತರಿಗಾಗಿ ವಿಶ್ವವ್ಯಾಪಿ ಬೆಂಬಲದ ನೆಟ್‌ವರ್ಕ್‌ಗೆ ಹೇಗೆ ಕಾರಣವಾಯಿತು ಎಂಬುದರ ಕಥೆ ಇದಾಗಿದೆ.

    play
    06:16
  • ಫಸ್ಸಲ್ನ ಕಥೆ

    ನಮ್ಮ ಪಾಕಿಸ್ತಾನದ ಕ್ರೈಸ್ತ ಕುಟುಂಬಕ್ಕಾಗಿ ಮತ್ತು ಪ್ರಪಂಚದಾದ್ಯಂತ ಕಿರುಕುಳಕ್ಕೊಳಗಾದ ವಿಶ್ವಾಸಿಗಳಿಗಾಗಿ ಪ್ರಾರ್ಥಿಸಲು ಈ ವೀಡಿಯೊ ನಿಮಗೆ ಮತ್ತು ಇತರ ಕ್ರೈಸ್ತರಿಗೆ ಸ್ಫೂರ್ತಿ ಮತ್ತು ಸವಾಲು ನೀಡುತ್ತದೆ.

    play
    04:43
  • ಸಾಂಗ್-ಚುಲ್ ಕಥೆ

    ಅಪಾಯದ ಹೊರತಾಗಿಯೂ ಉತ್ತರ ಕೊರಿಯನ್ನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವ ಮೂಲಕ ತನ್ನ ಮಾರ್ಗದರ್ಶಕರ ಹೆಜ್ಜೆಗಳನ್ನು ಅನುಸರಿಸಿದ ಒಬ್ಬ ವ್ಯಕ್ತಿ, ಪಾಸ್ಟರ್ ಹಾನ್ ರವರ ಶಿಷ್ಯರಲ್ಲಿ ಒಬ್ಬರಾದ ಸಾಂಗ್-ಚುಲ್ ರವರ ಕಣ್ಣುಗಳ ಮುಂದೆ ಕಥೆಯನ್ನು ಹೇಳಲಾಗಿದೆ.

    play
    06:57